ಸ್ವಾಗತ.......!!

Wednesday, 17 August 2011


ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ಆ ಕತ್ತಲೇ ನನ್ನ ಬಾಳ ದಾರಿ ದೀಪವಾಯಿತು

Monday, 15 August 2011

ಬಣ್ಣ

ಬರೆಯಲಾರೆ ಬದುಕಿನ ಬಣ್ಣಗಳ ಬಗ್ಗೆ.

ಬರೆಯುವುದಕಾದರು ಯಾವ ಬಣ್ಣ.,??

ಬರೆಯುವುದಕೊ೦ದು ಬಣ್ಣ,

ಬರೆದಮೇಲೊ೦ದು ಬಣ್ಣ,

ಎಲ್ಲರೊಳಗೂ ಸಹಸ್ರಾರು ಬಣ್ಣ,

ತಮಗೇ ತಿಳಿಯದ ಬಣ್ಣ,

ಬೇಕ೦ತಲೇ ಬಳಿದ ಬಣ್ಣ,

ಬೇಡವಾದರೂ ಉಳಿಸಿಕೊ೦ಡ ಬಣ್ಣ,

ಏಲ್ಲ ಬಣ್ಣಗಳ ನಡುವೆ,........

ಕಳೆದುಕೊ೦ಡ ತನ್ನ ಸ್ವ೦ತಿಕೆಯ ಬಣ್ಣ!!
The LAW is never the same for all. It depends on their personalities......!!

Friday, 12 August 2011

ಬುದ್ಧ


ಆ ಬಾವಿಯ ಆಳ ಬಲ್ಲವರಾರು?

ಅದ್ಯಾರೋ ಮೂವತ್ತು ಅಡಿಗಳೆ೦ದರು.

ಮತ್ತೊಬ್ಬರು ಇಪ್ಪತ್ತ್ಯೆದೆ೦ದರು.

ಇನ್ನೂಬ್ಬ ಲ೦ಗೂಟಿಯಲಿ ಜಿಗಿದ,

............. ಬಾವಿ ಮಾತ್ರ ನಿರ್ಲಿಪ್ತ.!!

Sunday, 8 May 2011

ಕಪ್ಪು-ಬೆಳದಿ೦ಗಳು


ಬೆಳೆದು.....ಬೆಳೆದೂ ಬೆಳದಿ೦ಗಳೂ ಕಪ್ಪಾಯಿತು!!

ಕಾದು....ಕಾದು... ಸಾಗರಕೂ ಮುಪ್ಪಾಯಿತು.!!

ಕಡೆಗೂ ಬರಲೇ ಇಲ್ಲ ಆ ದಿನ........

ಹರಿದ ಕಾಲದ ಕರಿ ನೆರಳಲಿ,

ಉದುರಿದ ಎಲೆಗಳೆಷ್ಟೊ.?

ಮಡಿದ ಹೂ ಗಳೆಷ್ಟೊ.....

ಸುಟ್ಟ ಬೆಳದಿ೦ಗಳು....!!

ಸತ್ತ ಸಾಗರ!!

ಕಮರಿದ ಕನಸುಗಳೆಷ್ಟೊ.....??

Friday, 6 May 2011

<< ? >>

ಅ೦ದು ಇ೦ದು ಎ೦ದೂ......,
ನಾ ಅವಳವನೆ......

ಇ೦ದು ಅ೦ದು, ಎ೦ದೂ
ನಾ ಮಾತ್ರಾ ಅವಳಿಗೆ ಬೇರೆಯವನೇ....!!
-manu!!

WIn IT......!!

AVOID THE ADVERTISEMENTS, YOU CAN WIN YOURSELF-EEEEASILY....!!