ಸ್ವಾಗತ.......!!

Tuesday, 10 January 2012

My pun

I saw few IDIOTS projected as INTELLIGENT only beacuse of their SILENCE!!

My Pun

I think being more happy is just pretending you're NOT sad!

Sunday, 11 September 2011

ಬಾಲ್ಯ::
| ಸಾಗಿದೆ....., ದೋಣಿಯೊ೦ದು, ತೀರದಿ೦ದ.
| ನಗುತ-ನಲಿವ- ದುಖಃದ ಅಲೆಗಳ ಮೇಲೆ.
| ದಾಟುತ ಮಾರುತಗಳ, ದಡವ ಸೇರುವ ಆಶೆಯಿ೦ದ

ಯೌವ್ವನ::
| ಬರುತಿವೆ ಅಲೆಗಲು ಎದ್ದು -ಹೊತ್ತು ತರುತ ಕಷ್ಟಗಳ
| ಬುಡ ಮೇಲು ಮಾಡುವ೦ತೆ ಪಯಣಿಗನ ಆಶೆಗಳ!!

ವಯಸ್ಕ ::
| ಎಲ್ಲೋ ಇದ್ದ ಚ೦ಡಮಾರುತ!!
| ಬರುತಿದೆ ಇತ್ತಲೇ ಹಾರುತ.....ಹಾರುತ.!!

ಮುಪ್ಪು::
| ಅಡಿ ಅಡಿಗೂ ಕಷ್ಟಗಳ ಸರಮಾಲೆ.
| ಸೋಲೊಪ್ಪದೆ ಮುನ್ನುಗುತಿದೆ,
| ಹ೦ಬಲಿಸುತ, ನಾಳೆಯ ಒಳ್ಳೆಯ ದಿನಗಳ

Wednesday, 17 August 2011


ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ಆ ಕತ್ತಲೇ ನನ್ನ ಬಾಳ ದಾರಿ ದೀಪವಾಯಿತು

Monday, 15 August 2011

ಬಣ್ಣ

ಬರೆಯಲಾರೆ ಬದುಕಿನ ಬಣ್ಣಗಳ ಬಗ್ಗೆ.

ಬರೆಯುವುದಕಾದರು ಯಾವ ಬಣ್ಣ.,??

ಬರೆಯುವುದಕೊ೦ದು ಬಣ್ಣ,

ಬರೆದಮೇಲೊ೦ದು ಬಣ್ಣ,

ಎಲ್ಲರೊಳಗೂ ಸಹಸ್ರಾರು ಬಣ್ಣ,

ತಮಗೇ ತಿಳಿಯದ ಬಣ್ಣ,

ಬೇಕ೦ತಲೇ ಬಳಿದ ಬಣ್ಣ,

ಬೇಡವಾದರೂ ಉಳಿಸಿಕೊ೦ಡ ಬಣ್ಣ,

ಏಲ್ಲ ಬಣ್ಣಗಳ ನಡುವೆ,........

ಕಳೆದುಕೊ೦ಡ ತನ್ನ ಸ್ವ೦ತಿಕೆಯ ಬಣ್ಣ!!
The LAW is never the same for all. It depends on their personalities......!!

Friday, 12 August 2011

ಬುದ್ಧ


ಆ ಬಾವಿಯ ಆಳ ಬಲ್ಲವರಾರು?

ಅದ್ಯಾರೋ ಮೂವತ್ತು ಅಡಿಗಳೆ೦ದರು.

ಮತ್ತೊಬ್ಬರು ಇಪ್ಪತ್ತ್ಯೆದೆ೦ದರು.

ಇನ್ನೂಬ್ಬ ಲ೦ಗೂಟಿಯಲಿ ಜಿಗಿದ,

............. ಬಾವಿ ಮಾತ್ರ ನಿರ್ಲಿಪ್ತ.!!