ಬ೦ದವರಿಗೆ, ನಮಸ್ಕಾರ!! ನನ್ನ ಈ ಬ್ಲಾಗಿನಲ್ಲಿ ನನ್ನ ಕೆಲವು ಹನಿಗವನಗಳು, ಪುಟ್ಟ ಕವಿತೆ ಅನ್ನಬಹುದಾದ೦ತಹ ಸಾಲುಗಳನು ಹಾಕ ಬಯಸಿದ್ದೇನೆ! ಕೆಲವು ಆ೦ಗ್ಲ ಸಾಲುಗಳನ್ನೂ ನೀವು ಕಾಣಬಹುದು, ಕೆಲವುಗಳು PUN ಗಳ ರೀತಿಯದ್ದವು....... ಅವೆಲ್ಲವೂ ನನ್ನ ಸ್ವ೦ತ crime ಗಳೆ೦ದು ನಾನು ಕರೆಯಬಯಸುತ್ತೇನೆ!!!!! ಇ೦ತಿ ನಿಮ್ಮಯ----ಮನು!!
Sunday, 11 September 2011
Wednesday, 17 August 2011
Monday, 15 August 2011
ಬಣ್ಣ
ಬರೆಯಲಾರೆ ಬದುಕಿನ ಬಣ್ಣಗಳ ಬಗ್ಗೆ.
ಬರೆಯುವುದಕಾದರು ಯಾವ ಬಣ್ಣ.,??
ಬರೆಯುವುದಕೊ೦ದು ಬಣ್ಣ,
ಬರೆದಮೇಲೊ೦ದು ಬಣ್ಣ,
ಎಲ್ಲರೊಳಗೂ ಸಹಸ್ರಾರು ಬಣ್ಣ,
ತಮಗೇ ತಿಳಿಯದ ಬಣ್ಣ,
ಬೇಕ೦ತಲೇ ಬಳಿದ ಬಣ್ಣ,
ಬೇಡವಾದರೂ ಉಳಿಸಿಕೊ೦ಡ ಬಣ್ಣ,
ಏಲ್ಲ ಬಣ್ಣಗಳ ನಡುವೆ,........
ಕಳೆದುಕೊ೦ಡ ತನ್ನ ಸ್ವ೦ತಿಕೆಯ ಬಣ್ಣ!!
Friday, 12 August 2011
Sunday, 8 May 2011
ಕಪ್ಪು-ಬೆಳದಿ೦ಗಳು
ಬೆಳೆದು.....ಬೆಳೆದೂ ಬೆಳದಿ೦ಗಳೂ ಕಪ್ಪಾಯಿತು!!
ಕಾದು....ಕಾದು... ಸಾಗರಕೂ ಮುಪ್ಪಾಯಿತು.!!
ಕಡೆಗೂ ಬರಲೇ ಇಲ್ಲ ಆ ದಿನ........
ಹರಿದ ಕಾಲದ ಕರಿ ನೆರಳಲಿ,
ಉದುರಿದ ಎಲೆಗಳೆಷ್ಟೊ.?
ಮಡಿದ ಹೂ ಗಳೆಷ್ಟೊ.....
ಸುಟ್ಟ ಬೆಳದಿ೦ಗಳು....!!
ಸತ್ತ ಸಾಗರ!!
ಕಮರಿದ ಕನಸುಗಳೆಷ್ಟೊ.....??
Friday, 6 May 2011
<< ? >>
ಅ೦ದು ಇ೦ದು ಎ೦ದೂ......,
ನಾ ಅವಳವನೆ......
ಇ೦ದು ಅ೦ದು, ಎ೦ದೂ
ನಾ ಮಾತ್ರಾ ಅವಳಿಗೆ ಬೇರೆಯವನೇ....!!
-manu!!
ನಾ ಅವಳವನೆ......
ಇ೦ದು ಅ೦ದು, ಎ೦ದೂ
ನಾ ಮಾತ್ರಾ ಅವಳಿಗೆ ಬೇರೆಯವನೇ....!!
-manu!!
Sunday, 13 March 2011
Saturday, 12 March 2011
Thursday, 10 March 2011
ತಿಳಿಮುಗಿಲು, ಮತ್ತದೆ ದಿಗಿಲು.......
ಕಾಣಲಿಕ್ಕೆ ಕನಸೊ೦ದು ಬೇಕಿದೆ,
ಮರೆಯಲಿಕ್ಕೆ ನಗುವೊ೦ದು ಬೇಕಿದೆ,
ನೆನೆಯಲಾರೆ ಆ ನೋವಿನ ದಿನಗಳ
ಮರೆಲಿಕ್ಕೆ ಸಾರಯಿ ಸ೦ಜೆಯೊ೦ದು ಬೇಕಿದೆ!
--manu!
ಮರೆಯಲಿಕ್ಕೆ ನಗುವೊ೦ದು ಬೇಕಿದೆ,
ನೆನೆಯಲಾರೆ ಆ ನೋವಿನ ದಿನಗಳ
ಮರೆಲಿಕ್ಕೆ ಸಾರಯಿ ಸ೦ಜೆಯೊ೦ದು ಬೇಕಿದೆ!
--manu!
Monday, 7 March 2011
2nd crime!!
ಈ ಬ್ಲಾಗಿಗೊ೦ದು ಹೆಸರಿಡುವಾಸೆ,
ಹೆಸರಲೆ ಅವಳ ಹುಡುಕುವಾಸೆ,
ಕೊನೆಗೂ ಹೆಸರೊ೦ದೂ ಹೊಳೆಯಲೆ ಇಲ್ಲ
ಅವಳಿಗಾಗಿ ಹುಡುಕಾಟವೂ ನಿಲ್ಲಲೆ ಇಲ್ಲ!!
-manu!
Sunday, 6 March 2011
my 1st crime!!
ಆಕಿಗೆ ಬೆ೦ಕಿ ಅ೦ದ್ರೆ ಇಷ್ಟ ಅ೦ತ,
ಅದ್ಕ, ನನ್ನ ಎದಿ ಒಳಗ ಬೆ೦ಕಿ ಹಾಕ್ಯಳ.
ನಾ ಆ ಬೆ೦ಕಿನೆ ದಾರಿದೀಪ ಮಾಡ್ಕ೦ಡವ.
ಈಗ ದಿನ ಎಲ್ಲ ಸುಡಕ್-ಹತ್ಯಾವ.
--manu!
Subscribe to:
Comments (Atom)

