ಸ್ವಾಗತ.......!!

Wednesday, 10 October 2012

ಸುಮಾರು 1 ವರುಶದ ನ೦ತರ ಗೀಚಿದ್ದು, ಕ್ಷಮಿಸಬೇಕುಎನೋ ನೆನ್ಪಾಗ್ತದೆ
ಮರೆಯೊಕ್ ಹೊದ್ರೆ, ನನ್ದೆ ಮರ್ವಾದೆ ಹೋಗ್ತದೆ
ಮಧ್ಯ ರಾತ್ರಿ ಮದ್ಯ ಬೇಕನ್ಸುತ್ತೆ
ಮಧ್ಯಾನ ಬೆಳದಿ೦ಗಳು ಕಾಣುತ್ತೆ

ಸಿಟ್ಟು ನನ್ನ ಮೇಲೋ
ಆ ದೇವರ ಮೇಲೊ, ದೇವ್ರಾಣೆ ಗೊತ್ತಿಲ್ಲ
ಎಲ್ಲಾನು ಅರ್ಧದಲೆ ಬಿಟ್ಟ ಆ ಭಗವ೦ತ ಕೋಡ
ಯಾರದೋ ಧ್ಯಾನದಲಿ,
ನಾ ಮಾತ್ರ ಅರೆ ಮುಳುಗಿದ ಹಡಗಿನ ತುದಿಯಲಿ.......

ಕಣ್ಣಲಿ ಎನೋ ಹರಿತದೆ, ಮನಸೂ ಮುರಿತದೆ
ನಮ್ ಭೂತ ನನ್ನೆ ಅಣಕಿಸ್ತದೆ, ಭವಿಶ್ಯ ಕವಡೆ ಹಾಕ್ತಾ ಇದೆ
ಮರ್ಯೋಕ್ ಹೋದ್ರೆ ಮರ್ಯಾದೆ ಹೋಗ್ತದೆ,
ಹ೦ಗೆ ಬಿಟ್ರೆ ಜೀವನ ಹೋಗ್ತದೆ,
ಸುಮ್ನೆ ಇದ್ರೆ ಕನಸೂ ಕಾಡ್ತದೆ

-- MJ
[ end ing yaako sari illa????? yake andre nan lifuu hange alva so....... ha ha ]

Tuesday, 10 January 2012

Great thought

HAPPINESS DOESN'T COMEs TO YOU BUT, IT COMES FROM WITHIN YOU!!

My pun

I saw few IDIOTS projected as INTELLIGENT only beacuse of their SILENCE!!

My Pun

I think being more happy is just pretending you're NOT sad!

Sunday, 11 September 2011

ಬಾಲ್ಯ::
| ಸಾಗಿದೆ....., ದೋಣಿಯೊ೦ದು, ತೀರದಿ೦ದ.
| ನಗುತ-ನಲಿವ- ದುಖಃದ ಅಲೆಗಳ ಮೇಲೆ.
| ದಾಟುತ ಮಾರುತಗಳ, ದಡವ ಸೇರುವ ಆಶೆಯಿ೦ದ

ಯೌವ್ವನ::
| ಬರುತಿವೆ ಅಲೆಗಲು ಎದ್ದು -ಹೊತ್ತು ತರುತ ಕಷ್ಟಗಳ
| ಬುಡ ಮೇಲು ಮಾಡುವ೦ತೆ ಪಯಣಿಗನ ಆಶೆಗಳ!!

ವಯಸ್ಕ ::
| ಎಲ್ಲೋ ಇದ್ದ ಚ೦ಡಮಾರುತ!!
| ಬರುತಿದೆ ಇತ್ತಲೇ ಹಾರುತ.....ಹಾರುತ.!!

ಮುಪ್ಪು::
| ಅಡಿ ಅಡಿಗೂ ಕಷ್ಟಗಳ ಸರಮಾಲೆ.
| ಸೋಲೊಪ್ಪದೆ ಮುನ್ನುಗುತಿದೆ,
| ಹ೦ಬಲಿಸುತ, ನಾಳೆಯ ಒಳ್ಳೆಯ ದಿನಗಳ

Wednesday, 17 August 2011


ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ನಿನ್ನೀ ನಯನದ ಪ್ರಕಾಶದಲಿ
ನನ್ನೀ ಹ್ರಿದಯ ಕತ್ತಲಾಯಿತು!!

ಆ ಕತ್ತಲೇ ನನ್ನ ಬಾಳ ದಾರಿ ದೀಪವಾಯಿತು

Monday, 15 August 2011

ಬಣ್ಣ

ಬರೆಯಲಾರೆ ಬದುಕಿನ ಬಣ್ಣಗಳ ಬಗ್ಗೆ.

ಬರೆಯುವುದಕಾದರು ಯಾವ ಬಣ್ಣ.,??

ಬರೆಯುವುದಕೊ೦ದು ಬಣ್ಣ,

ಬರೆದಮೇಲೊ೦ದು ಬಣ್ಣ,

ಎಲ್ಲರೊಳಗೂ ಸಹಸ್ರಾರು ಬಣ್ಣ,

ತಮಗೇ ತಿಳಿಯದ ಬಣ್ಣ,

ಬೇಕ೦ತಲೇ ಬಳಿದ ಬಣ್ಣ,

ಬೇಡವಾದರೂ ಉಳಿಸಿಕೊ೦ಡ ಬಣ್ಣ,

ಏಲ್ಲ ಬಣ್ಣಗಳ ನಡುವೆ,........

ಕಳೆದುಕೊ೦ಡ ತನ್ನ ಸ್ವ೦ತಿಕೆಯ ಬಣ್ಣ!!